ದುಬೈ: ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಫೆಬ್ರವರಿ 14 ಭಾನುವಾರ ಸಂಜೆ ದುಬಾಯಿ ದೇರಾ ಕೋರಲ್ ಹೊಟೇಲ್ ಸಭಾಂಗಣದಲ್ಲಿ ಅದ್ದೂರಿಯದ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಭಾರತದ ಮಾಜಿ ಕೇಂದ್ರ ಸಚಿವ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾನ್ಯ್ ಶ್ರೀ ಅಸ್ಕರ್ ಫೆರ್ನಾಂಡಿಸ್ ಮತ್ತು ಅವರ ಶ್ರೀಮತಿ ಬ್ಲಾಸಂ ಫೆರ್ನಾಂಡಿಸ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಶ್ರೀ ಎಂ. ಇ. ಮೂಳೂರ್ ರವರಿಂದ ಪವಿತ್ರ ಕುರಾನ್ ಪಠಣದಿಂದ ಕಾರ್ಯಕ್ರಮ ಪ್ರಾರಂಭ ವಾಯಿತು. ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮಹ್ಮದ್ ರವರಿಂದ ಸ್ವಾಗತ ಬಿ.ಸಿ.ಎಫ್.ಯು.ಎ.ಇ. ಅಧ್ಯಕ್ಷರಾದ ಡಾ. ಬಿ. ಕೆ. ಯುಸೂಫ್ ರವರಿಂದ ಪ್ರಸ್ತಾವಿಕ ಭಾಷಣ, ಬ್ಯಾರೀಸ್ ಕಲ್ಚರಲ್ ಫೋರಂ ನ ನೂತನ ವೆಬ್ ಸೈಟನ್ನು ಮಾನ್ಯ ಅಸ್ಕರ್ ಫೆರ್ನಾಂಡಿಸ್ ರವರು ಅಧಿಕೃತವಾಗಿ ಉದ್ಘಾಟಿಸಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ವೇದಿಕೆಯಲ್ಲಿ ಗಣ್ಯ ಅಥಿತಿಗಳಾದ ಬಿ.ಸಿ.ಎಫ್ ಮಹಾ ಪೋಷಕರಾದ ಶ್ರೀ ಜಫ್ರುಲ್ಲಾ ಖಾನ್, ಗಲ್ಫ್ ಮೇಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಧ್ಯಕ್ಷರಾದ ಶ್ರೀ ತುಂಬೆ ಮೊಹಿದ್ದಿನ್, ಇಂಡಿಯನ್ ಇಸ್ಲಾಮಿಕ್ ಸೆಂಟರಿನ ಅಧ್ಯಕ್ಷರಾದ ಶ್ರೀ ಸಯ್ಯದ್ ಖಲೀಲ್, ದಕ್ಷಿಣ ಕನ್ನಡದಿಂದ ಆಗಮಿಸಿದ್ದ ಶ್ರೀ ಎ.ಕೆ.ಸುಲೈಮಾನ್ ರವರು ಆಸೀನರಾಗಿದ್ದರು.
ಸರ್ಕಾರ ಅಲ್ಪಸಂಖ್ಯಾತರಿಗೆ ನೀಡಿರುವ ಸವಲತ್ತನ್ನು ಸರಿಯಾಗಿ ಮಾಹಿತಿ ನೀಡಿ.
ಶ್ರೀ ಜಫ್ರುಲ್ಲಾ ಖಾನ್ ತಮ್ಮ ಅತ್ಯುತ್ತಮ ವಾಕ್ ಚಾತುರ್ಯದಿಂದ ಭಾರತ ಮಾತೆಯ ಸುಪುತ್ರರು ದೇಶ ಪ್ರೇಮದಿಂದ ದೇಶವನ್ನು ಗೌರವಿಸಿ ಪ್ರೀತಿಸಿದರೆ, ಕಪುತ್ರರು ತನ್ನ ತಾಯಿಯ ತೊಡೆಯ ಮೇಲೆ ಕುಳಿತುಕೊಂಡೆ ದೇಶದ್ರೋಹ ಮಾಡುವವರನ್ನು ಶಿಕ್ಷಿಸಿ, ಸರ್ವಧರ್ಮ ಸಮನ್ವಯ ಕಾಪಾಡುವ ಕೆಲಸವನ್ನು ಮಾಡಬೇಕು. ಸರ್ಕಾರ ಅಲ್ಪಸಂಖ್ಯಾತರಿಗೆ ನೀಡಿರುವ ಸವಲತ್ತುಗಳನ್ನು ಸರಿಯಾದ ಮಾಹಿತಿ ನೀಡಿ ಪೂರ್ಣ ಪ್ರಯೋಜನ ಪಡೆಯುವಂತಾಗಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಾನ್ಯತೆ ನೀಡಿ ಎಲ್ಲರನ್ನು ವಿದ್ಯಾವಂತನಾಗಿ ಮಾಡಬೇಕೆಂದು ಕರೆ ನೀಡಿದರು.
ಮಂಗಳೂರು ವಿಮಾನ ಯಾನ ದರ ಹೆಚ್ಚು, ಲಗೇಜಿನಲ್ಲಿ ತಾರತಮ್ಯ ಏಕೆ?
ಶ್ರೀ ಸಯ್ಯದ್ ಖಲೀಲ್ ರವರು ತಮ್ಮ ಮಾತಿನಲ್ಲಿ, ನಮ್ಮ ಪಕ್ಕದ ರಾಜ್ಯ ಕೇರಳದ ಎರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಯಾನದಲ್ಲಿ ಕಡಿಮೆ ದರವಿದ್ದು, ಮಂಗಳೂರು ವಿಮಾನ ಯಾನಕ್ಕೆ ಮಾತ್ರ ಯಾಕೆ ಹೆಚ್ಚಿನ ದರ, ಲಗೆಜಿನಲ್ಲಿ ಹೋಗುವಾಗ ಬರುವಾಗ ತೂಕದಲ್ಲಿ ತಾರತಮ್ಯ ಏಕೆ?, ಬೇರೆ ವಿಮಾನ ಯಾನಕ್ಕೆ ಅನುಮತಿ ನೀಡಿ ಎಂದು ತಮ್ಮ ನೋವನ್ನು ಅತಿಥಿಗಳ ಮುಂದಿಟ್ಟರು.
ಬಿ.ಸಿ.ಎಫ್. ಯು.ಎ.ಇ. ಅತ್ಯುತ್ತಮ ಸಂಘಟನೆಯಾಗಿದೆ.
ಶ್ರೀ ತುಂಬೆ ಮೊಹಿದ್ದಿನ್ ಸಭಾಂಗಣದಲ್ಲಿ ಅಹ್ವಾನಿತರಾಗಿದ್ದ ವಿವಿಧ ಸಂಘಟನೆಗಳ ಮುಖ್ಯಸ್ತರು, ಸರ್ವ ಧರ್ಮಿಯರು ಸಮಾರಂಭದಲ್ಲಿ ಭಾಗವಹಿಸಿದ್ದು, ಡಾ. ಬಿ. ಕೆ. ಯೂಸುಫ್ ರವರ ನಾಯಕತ್ವದಲ್ಲಿ ಬಿ.ಸಿಎಫ್. ಯು.ಎ.ಇ. ಭಾವೈಕ್ಯತೆಯನ್ನು ಮೆರೆದು ಉತ್ತಮ ಸಂಘಟನೆಯಾಗಿದೆ. ಎಂದು ಹರ್ಷ ವ್ಯಕ್ತಪಡಿಸಿದರು.
ಕರಾವಳಿಯ ರಸ್ತೆಗೆ ಮುಕ್ತಿ ಯಾವಾಗ?
ಮೊಗವೀರ್ಸ್ ಯು.ಎ.ಇ. ಅಧ್ಯಕ್ಷರಾದ ಶ್ರೀ ಎಲ್.ವಿ.ಪುತ್ರನ್ ರವರು ತಮ್ಮ ಮಾತಿನಲ್ಲಿ, ಕರಾವಳಿಯ ರಸ್ತೆಯ ದುಸ್ಥಿತಿಗೆ ಯಾವಾಗ ಮುಕ್ತಿ ದೊರೆಯುತ್ತದೆ. ಮಂಗಳೂರಿನಲ್ಲಿ ಎಲ್ಲಾ ಕಡೆಗಳಿಂದ, ರೈಲು ನಿಲ್ದಾಣದಿಂದ, ವಿಮಾನ ನಿಲ್ದಾಣದಿಂದ ನೇರ ಸಂಪರ್ಕ ವಿರುವ ಕೇಂದ್ರ ಬಸ್ ನಿಲ್ದಾಣದ ಅಗತ್ಯದ ಬಗ್ಗೆ ಮನವಿ ಮಾಡಿದರು.
ಅಸ್ಕರ್ ಫೆರ್ನಾಂಡಿಸ್ ರೊಂದಿಗೆ ನೇರ ಸಂವಾದ
ಶ್ರೀ ಪ್ರಭಾಕರ ಅಂಬಲತೆರೆಯವರು ತಮ್ಮ ಕೋರಿಕೆಯಲ್ಲಿ ಅನಿವಾಸಿ ಭಾರತೀಯರಿಗೆ ನೆರೆಯ ರಾಜ್ಯ ಕೇರಳ ಸರ್ಕಾರ ನೀಡಿರುವ ವಿಮಾ ಸವಲತ್ತು, ಪಿಂಚಣಿ ಯೋಜನೆಯನ್ನು ಅನಿವಾಸಿ ಕನ್ನಡಿಗರಿಗೆ ಸಹ ನೀಡುವಂತಾಗಬೇಕು ಎಂದು ಮನವೆ ಮಾಡಿದರು.
ಶ್ರೀ ಬಿ. ಕೆ. ಗಣೆಶ್ ರೈ ಯವರು, ಅನಿವಾಸಿ ಕನ್ನಡಿಗರ ಬಹಳ ವರ್ಷಗಳ ಬೇಡಿಕೆ ಕರ್ನಾಟಕದಲ್ಲಿ ರೇಶನ್ ಕಾರ್ಡಿನಲ್ಲಿ ಹೆಸರು ದಾಖಲಿಸಲು, ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು, ಹಲವು ಸಂಘಟನೆಗಳು ಹಲವು ಸಚಿವರು, ಸರ್ಕಾರದೊಂದಿಗೆ ಮನವಿ ಮಾಡಿದರೂ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಕಹಿ ಸತ್ಯವನ್ನು ಸಭೆಯ ಮುಂದಿಟ್ಟರು.
ಶ್ರೀ ಹರ್ಮನ್ ಲೂಯಿಸ್ ರವರು ತಮ್ಮ ಮಾತಿನಲ್ಲಿ, ಭಾರತ ದೇಶದಲ್ಲಿ ನಡೆಯುತ್ತಿರುವ ಬಂದ್, ಹಿಂಸಾಚಾರ, ಅನಗತ್ಯ ಗಲಭೆ ಇತ್ಯಾದಿಗಳಿಗೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.
ಶ್ರೀ ಎಂ.ಇ. ಮೂಳೂರ್ ರವರು- ಕರ್ನಾಟಕದಲ್ಲಿ ಅನಿವಾಸಿಗಳಿಗಾಗಿ ಜಿಲ್ಲಾ, ತಾಲೂಕು ಕೇಂದ್ರಗಳು, ಪೊಲೀಸ್ ಠಾಣೆಗಳಲ್ಲಿ ಎನ್.ಆರ್. ಐ. ಹೆಲ್ಪ್ ಡೆಸ್ಕ್ ಗಳನ್ನು ಪ್ರಾಂಭಿಸಬೇಕು ಎಂದು ಸಲಹೆ ನೀಡಿದರು.
ಬಿ.ಸಿ.ಎಫ್.ಯು.ಎ.ಇ. ವತಿಯಿಂದ ಮಾನ್ಯ ಅಸ್ಕರ್ ಫೆರ್ನಾಂಡಿಸ್ ರವರಿಗೆ ಆತ್ಮೀಯ ಸನ್ಮಾನ
ಬ್ಯಾರೀಸ್ ಕಲ್ಚರಲ್ ಫೊರಂ ಯು.ಎ.ಇ. ಯಿಂದ ಮಾನ್ಯ ಅಸ್ಕರ್ ಫೆರ್ನಾಂಡಿಸ್ ರವರನ್ನು ಶ್ರೀ ಜಫ್ರುಲ್ಲ ಖಾನ್ ರವರು ಶಾಲು ಹೊದಿಸಿ, ಡಾ. ಬಿ. ಕೆ. ಯೂಸುಫ್ ರವರು ಸ್ಮರಣಿಕೆ ನೀಡಿ ಸರ್ವರ ಸಮ್ಮುಖದಲ್ಲಿ ಆತ್ಮೀಯವಾಗಿ ಸನ್ಮ್ಮನಿಸಿ ಗೌರವಿಸಿದರು. ಶ್ರೀಮತಿ ಬ್ಲಾಸಂ ಫೆರ್ನಾಂಡಿಸ್ ರವರನ್ನು ಡಾ. ಸಚಿತಾ ಮೋಹನ್ ಅತ್ತಾವರ ರವರು ಶಾಲು ಹೊದಿಸಿ,ಪುಷ್ಪ ಗುಚ್ಚ ನೀಡಿ ಗೌರವಿಸಿದರು.
ಸಚ್ಚಾರ್ ಸಮಿತಿ ವರದಿಗೆ ಸರ್ಕಾರ ಕಾರ್ಯರೂಪಕ್ಕೆ - ಅಸ್ಕರ್ ಫೆರ್ನಾಂಡಿಸ್ ಸನ್ಮಾನಕ್ಕೆ ನೀಡಿದ ಉತ್ತರ
ಸಭಾಂಗಣದಲ್ಲಿದ್ದ ಎಲ್ಲಾ ಸಂಘಟನೆಗಳ ಮುಖ್ಯಸ್ಥರು, ಅಹ್ವಾವಿತರು, ಬ್ಯಾರಿಸ್ ಕಲ್ಚರಲ್ ಫೋರಂ ನ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರಿಗೆ, ತಮ್ಮ ಮೆಚ್ಚುಗೆಯ ಕೃತಜ್ಞತೆಯನ್ನು ಸೊಚಿಸಿ, ಎಲ್ಲಾ ಪ್ರಶ್ನೆಗಳು ಬೇಡಿಕೆಗಳಿಗೆ ಉತ್ತರ ನೀಡುತ್ತಾ, ಭಾರತ ಸರ್ಕಾರ ನೇಮಕ ಮಾಡಿದ ’ಸಚ್ಚಾರ್ ಸಮಿತಿ’ ನೀಡಿರುವ ವರಧಿ, ಪರಿಶಿಷ್ಟ ಜಾತಿ, ಪಂಗಡ ಗಳ ಶಿಕ್ಷಣ, ಬಡತನ, ಸಾಮಾಜಿಕ ಜೀವನಕಿಂತಲೂ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಸಚ್ಚಾರ್ ಸಮಿತಿಯ ವರಧಿಯನ್ನು ಭಾರತ ಸರ್ಕಾರ ಕಾರ್ಯರೂಪಕ್ಕೆ ತರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಹಿಳೆಯರಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ.
ಪುತ್ತೂರು-ಮಂಗಳೂರು-ಬೈಂದೂರು ಮಾರ್ಗ ಅಧುನಿಕರಣಕ್ಕೆ ೩೨ ಕೋಟಿ ರೂಪಾಯಿ ಬಿಡುಗಡೆಮಾಡಲಾಗಿದೆ. ಹಜ್ ಯಾತ್ರೆಯಲ್ಲಿರುವ ಪ್ರಯಾಣ ದರದ ತಾರತಮ್ಯವನ್ನು ಸರಿಪಡಿಸಲಾಗುವುದು. ಬ್ಯಾರಿ ಸಮುದಾಯದ ಮಕ್ಕಳಿಗೆ ವಿದ್ಯಾ ಭ್ಯಾಸಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಪ್ರಾಮಾಣಿಕವಾಗಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಪಡುವುದಾಗಿ ಮನ ಬಿಚ್ಚಿ ಆತ್ಮೀಯತೆಯಿಂದ ಮಾನ್ಯ ಅಸ್ಕರ್ ಫೆರ್ನಾಂಡಿಸ್ ಮಾತನಾಡಿದರು.
ಡಾ ಕಾಪು ಮಹ್ಮದ್ ರವರಿಗೆ ಬಿ.ಸಿ.ಎಫ್.ಯು.ಎ.ಇ. ಯ ಗೌರವ ಸನ್ಮಾನ
ದಿ ಲಂಡನ್ ಅಮೇರಿಕನ್ ಸಿಟಿ ಕಾಲೇಜ್ ಮತ್ತು ವರ್ಲ್ಡ್ ಒಫ್ ನಾಲೆಜ್ ಮ್ಯಾನೆಜ್ಮೆಂಟ್ ಡೆವಲಪ್ಮೆಂಟ್ ಸೆಂಟರ್ - ಯು.ಎ.ಇ. ಶಾರ್ಜಾ ದ ಡೀನ್-ನಿರ್ಧೇಶಕರಾದ ಮತ್ತು ಬ್ಯಾರೀಸ್ ಕಲ್ಚರಲ್ ಫೋರಂ ಯು. ಎ. ಇ. ಯ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ ಕಾಪು ಮಹ್ಮದ್ ರವರ ಪೂರ್ಣ್ ಅಪರಿಚಯವನ್ನು ಶ್ರೀ ಎಂ ಇ. ಮೂಳೂರ್ ಮಾಡಿದರು. ಬಿ.ಸಿ.ಎಫ್.ಯು.ಎ.ಇ.ಯ ಪರವಾಗಿ ಮಾನ್ಯ ಅಸ್ಕರ್ ಫೆರ್ನಾಂಡಿಸ್ ರವರು ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸನ್ಮಾನ ಪಡೆದ ಡಾ. ಕಾಪು ಮಹ್ಮದ್ ರವರು ಕೃತಜ್ಞತೆಯನ್ನು ಸಲ್ಲಿಸುತ್ತ ’ಲೈಫ್ ಯಿಸ್ ಬ್ಯೂಟಿ, ಲೈಫ್ ಯಿಸ್ ಡ್ಯೂಟಿ, ನಾನು ಭಾರತ ದೇಶಕ್ಕೆ ಸೇವೆ ಸಲ್ಲಿಸಲು ಸದಾ ಸಿದ್ದನಾಗಿದ್ದೇನೆ ಎಂದು ತಮ್ಮ ಮನದ ಅಭಿಲಾಷೆಯನ್ನು ಸಭೆಗೆ ತಿಳಿಸಿದರು.
ಸಮಾರಂಭದಲ್ಲಿ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ನೋವೆಲ್ ಡಿ’ಅಲ್ಮೆಡಾ, ಪೂರ್ವ ಅಧ್ಯಕ್ಷರುಗಳಾದ ಶ್ರೀ ಗಣೇಶ್ ರೈ, ಶ್ರೀ ಪ್ರಭಾಕರ ಅಂಬಲತೆರೆ, ದುಬಾಯಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ಆರ್. ತಂತ್ರಿ, ಕರ್ನಾಟಕ ಸಂಘ ದುಬೈಯ ಪೂರ್ವ ಅದ್ಯಕ್ಷ ಹಾಗೂ ಗಲ್ಫ್ ಕನ್ನಡಿಗದ ಸಂಪಾದಕರು ಶ್ರೀ ಬಿ. ಜಿ. ಮೋಹನ್ ದಾಸ್, ಬಿಲ್ಲಾವಾಸ್ ದುಬಾಯಿ ಅಧ್ಯಕ್ಷರಾದ ಶ್ರೀ ಮೋಹನ್ ಅತ್ತಾವರ, ಮೊಗವೀರ್ಸ್ ಯು.ಎ.ಇ. ಅಧ್ಯಕ್ಷರಾದ ಶ್ರೀ ಎಲ್. ವಿ. ಪುತ್ರನ್, ರೇಡಿಯೊ ಸ್ಪೈಸಿನ ಮುಖ್ಯಸ್ತರಾದ ಶ್ರೀ ಹರ್ಮನ್ ಲೂಯಿಸ್, ಶ್ರೀ ಜಯರಾಮ ಸೋಮಯಾಜಿ ಊರಿನಿಂದ ಬಂದ ಕನ್ನಡ ಚಲನ ಚಿತ್ರ ನಿರ್ಧೇಶಕ ಶ್ರೀ ಕಟ್ಟೆ ರಾಮಚಂದ್ರ, ಶ್ರೀ ಮಹಾಬಲ ಮೂರ್ತಿ ಕೊಂಡ್ಲಕೆರೆ, ಶ್ರೀ ಶಿವಾನಂದ ಹೆಬ್ಬಾರ್, ದಾಯಿಜಿ ವರ್ಲ್ದ್ ನ ಶ್ರೀ ಶೋಧನ್ ಪ್ರಸಾದ್, ಶ್ರೀ ರಾಮ್ಸಿ ಫೆರ್ನಾಂಡಿಸ್, ಗಲ್ಫ್ ಕನ್ನಡಿಗದ ಶ್ರೀ ಅಶೋಕ್ ಬೆಳ್ಮಣ್, ನಮ್ಮ ಟಿ. ವಿ. ಯ ಶ್ರೀ ವಿನಯ್ ಮತ್ತು ಹಲವಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮ ನಿರ್ವಹಣೆಯನ್ನು ಡಾ. ಕಾಪು ಮಹ್ಮದ್ ಮತ್ತು ಶ್ರೀ ಎಂ ಇ. ಮೂಳೂರ್ ನಿರ್ವಹಿಸಿದ್ದರು.
ಕೊನೆಯಲ್ಲಿ ಶ್ರೀ ಮಹ್ಮದ್ ಶಾಹದ್ ಸರ್ವರನ್ನು ವಂದಿಸಿದರು. ಕೊನೆಯಲ್ಲಿ ವಿಶೇಷ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಸೌಜನ್ಯ: ಗಲ್ಫ್ ಕನ್ನಡಿಗ